Surprise Me!

ಈ ಮೂರು ರಾಶಿಯವರಿಗೆ ಈ ವರ್ಷ ಪ್ರೀತಿಯಲ್ಲಿ ಮೋಸವಾಗಲಿದೆ | Oneindia Kannada

2018-01-23 1,892 Dailymotion

These three zodiac signs that will break your Heart. There are years when you are up and years when you are down. In 2018, there are zodiac signs that could experience heartbreak because the planets don't seem to be working in their favor. But that's a matter of perception. In truth, when the universe seems to be against you, it's really only trying to teach you a lesson. As when you were in school, some of life's lessons come harder than others. Watch video to know more about this.



ಜೀವನದಲ್ಲಿ ಪ್ರೀತಿ, ಹಣ ಹಾಗೂ ಆಸ್ತಿಯು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಹಣ ಹಾಗೂ ಆಸ್ತಿಯನ್ನು ಕಳೆದುಕೊಂಡರೆ ಜೀವನವನ್ನು ಹೇಗೋ ನಡೆಸಬಹುದು. ಆದರೆ ಮನಸ್ಸಿಗೆ ಹತ್ತಿರವಾದವರು, ನಮ್ಮ ಜೀವ ಎನಿಸಿಕೊಂಡ ವ್ಯಕ್ತಿಯನ್ನು ಕಳೆದುಕೊಂಡರೆ ಅಥವಾ ಅವರು ನಮ್ಮಿಂದ ದೂರವಾದರೆ ಅದರಿಂದ ಉಂಟಾಗುವ ನೋವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆ ನೋವು ಹಾಗೂ ಬೇಸರ ನಮ್ಮನ್ನು ಮಾನಸಿಕವಾಗಿ ಕುಂದುವಂತೆ ಮಾಡುತ್ತದೆ.

ನಮ್ಮ ಜೀವನದಲ್ಲಿ ನಾವು ಪಡೆದುಕೊಳ್ಳುವ ಪ್ರೀತಿ ಹಾಗೂ ವಾತ್ಸಲ್ಯ ಎಲ್ಲವೂ ನಮ್ಮ ಕುಂಡಲಿಯನ್ನು ಆಧರಿಸಿರುತ್ತದೆ. ಕುಂಡಲಿಯಲ್ಲಿ ಸಂಚಾರ ಕೈಗೊಳ್ಳುವ ಗ್ರಹಗತಿಗಳು ವಿಭಿನ್ನ ಬಗೆಯ ಪರಿಣಾಮವನ್ನು ನೀರುತ್ತವೆ. ಇವುಗಳ ಆಧಾರದ ಮೇಲೆಯೇ ವ್ಯಕ್ತಿ ತನ್ನ ವರ್ತನೆಯನ್ನು ತೋರುತ್ತಾನೆ. ಜೊತೆಗೆ ಅದೃಷ್ಟ ಮತ್ತು ನತದೃಷ್ಟ ಬದುಕನ್ನು ಅನುಭವಿಸುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

2018ರಲ್ಲಿ ಗ್ರಹಗತಿಗಳು ವಿಭಿನ್ನ ತಿರುವನ್ನು ತೆಗೆದುಕೊಂಡಿವೆ. ಇದರ ಅನ್ವಯವಾಗಿ ಕೆಲವು ರಾಶಿ ಚಕ್ರದವರು ಲಾಭವನ್ನು ಅನುಭವಿಸಲಿದ್ದಾರೆ. ಇನ್ನೂ ಕೆಲವರು ವರ್ಷದುದ್ದಕ್ಕೂ ಅದೃಷ್ಟ ಹಾಗೂ ಸಂತೋಷವನ್ನು ಅನುಭವಿಸಲಿದ್ದಾರೆ. ಕೆಲವು ರಾಶಿಚಕ್ರದವರು ನೋವನ್ನು ಅನುಭವಿಸಲಿದ್ದಾರೆ.

ಕೆಲವು ರಾಶಿಯವರು ತಮ್ಮ ಪ್ರೀತಿಯನ್ನು ಕಳೆದುಕೊಂಡು ಬಹಳ ನೋವನ್ನು ಅನುಭವಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ಪ್ರೀತಿ ದೂರಾಗಲು ಕಾರಣವೇನು?